ಅಪರ್ಣಾ
	
ಪಾರ್ವತಿಯ ಒಂದು ರೂಪ. ಈಶ್ವರನನ್ನು ಪತಿಯಾಗಿ ಪಡೆಯಲು ಆತನನ್ನು ಕುರಿತು ತಪಸ್ಸು ಮಾಡುವ ಕಾಲದಲ್ಲಿ ಆಹಾರವನ್ನು ತ್ಯಜಿಸಿ ಕೊನೆಗೆ ಆ ಕಾಲದ ಋಷಿಗಳ ಆಹಾರವಾದ ಮರದ ಎಲೆಯನ್ನೂ ಸ್ವೀಕರಿಸಲಿಲ್ಲವಾಗಿ ಆಕೆಗೆ ಈ ಹೆಸರು ಬಂತು.											 
   
(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ